ರಾಯಚೂರು: ಎನ್ ಹೊಸೂರು ಸೇತುವೆ ಮತ್ತೆ ಕೊಚ್ಚಿಹೋಯ್ತು; ರಣಭೀಕರ ಮಳೆಗೆ ಅಲ್ಲೋಲ ಕಲ್ಲೋಲ
ಎನ್. ಹೊಸೂರು ಗ್ರಾಮದ ಹಳ್ಳದ ಸೇತುವೆ ಮತ್ತೆ ಕೊಚ್ಚಿ ಹೋಗಿದೆ. ಸುಮಾರು 6 ವರ್ಷಗಳಿಂದ ಸುಸಜ್ಜಿತ ರಸ್ತೆ ಸೇತುವೆ ಇಲ್ಲದೆ ಪರದಾಡುತ್ತಿದ್ದಾರೆ. ದಿನ ಬೆಳಗಾದರೆ ಶಾಲೆಗೆ ಹೋಗುವ ಮಕ್ಕಳು, ದಿನಗೂಲಿದಾರರು, ಸಾರ್ವಜನಿಕರಿಗೆ ತೀರಾ ತೊಂದರೆಯಾಗಿದೆ. ಈ ಕುರಿತು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಸರ್ಕಾರ ತಾತ್ಕಾಲಿಕ ಕಾಮಗಾರಿಗೆ ಒಂದಿಷ್ಟು ಹಣ ಬಿಡುಗಡೆ ಮಾಡಿತ್ತು. ಆ ಹಣದಲ್ಲಿ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕಳಪೆ ಕಾಮಗಾರಿ ಮಾಡಿ ಅದರಲ್ಲಿಯೂ ಸಹ ಒಂದಿಷ್ಟು ಹಣ ಗುತ್ತಿಗೆದಾರರು ಲೂಟಿ ಮಾಡಿದ್ದಾರೆಂಬ ಆರೋಪಗಳಿವೆ. 2020 ರಲ್ಲಿ ಅಂದಿನ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಮನ