ಕೊಲ್ಹಾರ: ಪಟ್ಟಣದಲ್ಲಿ ಭೂ ಪರಿಹಾರಕ್ಕಾಗಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ 3ದಿನಕ್ಕೆ ಮುಂದುವರಿದ ಉಪವಾಸ ಸತ್ಯಾಗ್ರಹ
ಕೃಷ್ಣ ಮೇಲ್ದಂಡೆ 3ನೇ ಹಂತದ ರೈತರಿಗೆ ಭೂಪರಿಹಾರ ಒದಗಿಸಬೇಕು ಎಂದು ಆ ಗ್ರಹಿಸಿ, ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಭೂ ಸಂತ್ರಸ್ತ ರೈತರಿಂದ ಉಪವಾಸ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಮುಂದುವರೆದಿದೆ. ಭೂಸಂತ್ರರಿಗೆ ಒಂದು ಎಕರೆಗೆ 55 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಕೂಡಲೇ ಸರ್ಕಾರ ಭೂಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಮಂಗಳವಾರ ಮಧ್ಯಾನ 3ಗಂಟೆ ಸುಮಾರಿಗೆ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹಾಗೂ ರೈತರು ಹೇಳಿದರು.