ಶಿರಸಿ : ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ರೂ.2.20 ಕೋಟಿ ಅನುದಾನದಲ್ಲಿ ಸಿದ್ದಾಪುರ ತಾಲೂಕಿನ ಕುಮಟಾ-ಕೊಡಮಡಗಿ ರಾಜ್ಯ ಹೆದ್ದಾರಿ 48ರ ರಸ್ತೆ ಸುಧಾರಣಾ ಕಾಮಗಾರಿಗೆ ಬೇಡ್ಕಣಿಯ ಆಂಜನೇಯ ದೇವಾಲಯದ ಬಳಿ ಶಾಸಕ ಭೀಮಣ್ಣ ನಾಯ್ಕ ಅವರು ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ರೂ. 65 ಲಕ್ಷ ವೆಚ್ಚದಲ್ಲಿ ತಾಲೂಕಿನ ಕ್ಯಾದಗಿ, ಇಳಿಮನೆ, ನೇಗಾರ, ಕರ್ಕಿಮಕ್ಕಿ, ವಂದಾನೆ, ದೊಡ್ಮನೆ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ಗುತ್ತಿಗೆದಾರರಾದ ಎ.ಜಿ.ನಾಯ್ಕ, ಸತೀಶ ಗೌಡರ್, ಸ್ಥಳೀಯ ಗ್ರಾಪಂ ಅಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು.