ಮೈಸೂರು: ಶಾಸಕ ಟಿ ಎಸ್ ಶ್ರೀವತ್ಸ ವಿರುದ್ಧ ಕೆಆರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಕುರುಬ ಸಮಾಜದ ಯುವ ಮುಖಂಡ ಹೇಮಂತ್ ಕುಮಾರ್
Mysuru, Mysuru | Sep 16, 2025 ಮೈಸೂರು : ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಇಂದು ಕುರುಬ ಸಮಾಜದ ಯುವ ಮುಖಂಡ ಹೇಮಂತ್ ಕುಮಾರ್ ಜಿ ರವರ ನೇತೃತ್ವದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಬಗ್ಗೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ಅರ್ಜಿ ಸಲ್ಲಿಸಲಾಯಿತು. ಕೃಷ್ಣರಾಜವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸರವರು ಕರುಬ ಸಮಾಜ ಮತ್ತು ನಾಯಕ ಸಮಾಜದ ಮಧ್ಯೆ ಬಿರುಕು ಸೃಷ್ಟಿಸುವ ದುರುದ್ದೇಶದಿಂದ ಮಾಧ್ಯಮದಲ್ಲಿ ಹೇಳಿಕೆ ನೀಡುತ್ತಿದ್ದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರದ ಹೇಳಿಕೆಯಾಗಿದ್ದು ಕೂಡಲೇ ಶಾಸಕ ಟಿ ಎಸ್ ಶ್ರೀವತ್ಸರವರನ್ನು ಬಂಧಿಸಿ ಸಮಾಜದ ಶಾಂತಿ ಕಾಪಾಡಬೇಕಾಗಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೇಮಂತ್ ಕುಮಾರ್ ಜಿ ಕುರುಬರಹಳ್ಳಿ, ಲೋಕೇಶ್ ಕುಮಾರ್ ಮಾದಾಪುರ, ಕಾಳೇಗೌಡ ಕೆರ್ಗಳ್ಳಿ ಉಪಸಿತರಿದ್ದರು.