ಮಡಿಕೇರಿ: ಶೈಕ್ಷಣಿಕ ಹಾಗೂ ಸಾಮಾಜಿಕ ಆರ್ಥಿಕ ಜನಗಣತಿ, ವೀರಶೈವ ಲಿಂಗಾಯಿತ ಎಂದು ನಮೂದಿಸಲು ಅದ್ಯಕ್ಷ ಹೆಚ್ ವಿ ಶಿವಪ್ಪ ಮನವಿ
8.ರಾಜ್ಯ ಸರ್ಕಾರದ ವತಿಯಿಂದ ಸೆ.22 ರಿಂದ ಅ.12 ರವರೆಗೆ ಹಿಂದುಳಿದ ಆಯೋಗದಿಂದ ನಡೆಯುವ ಜನತೆಯ ಶೈಕ್ಷಣಿಕ ಹಾಗೂ ಸಾಮಾಜಿಕ, ಆರ್ಥಿಕ ಜನಗಣತಿಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದವರು ತಪ್ಪದೆ "ವೀರಶೈವ ಲಿಂಗಾಯಿತ" ಎಂದು ಬರೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಅನುಸೂಚಿಯ 8ರ ಧರ್ಮದ ಕಾಲಂನಲ್ಲಿ ನೀಡಿರುವ 11ನೇ ಕೋಡ್ ನ 'ಇತರೆ' ಎಂದಿರುವ ಸ್ಥಳದಲ್ಲಿ 'ವೀರಶೈವ ಲಿಂಗಾಯಿತ ಎಂದು ಮತ್ತು 9 ರ ಜಾತಿ ಕಾಲಂ ನಲ್ಲಿ ಲಿಂಗಾಯಿತ ಅಥಾವ ವೀರಶೈವ ಎಂದು ನಿಗದಿತ ಸಂಕೇತ ಸಂಖ್ಯೆಯನ್ನು ನೀಡಿ ನಮೂದಿಸಬೇಕು. 10ರ ಉಪಜಾತಿ ಕಾಲಂ ನಲ್ಲಿ ತಮ್ಮ ಉಪಜಾತಿಗಳನ್ನು ಕೋಡ್ ಸಮೇತ ದಾಖಲಿಸಿ ಮಾಹಿತಿಗಳನ್ನು