ಚಿತ್ತಾಪುರ: ಸಚಿವ ಪ್ರಿಯಾಂಕ್ ಖರ್ಗೆರಿಗೆ ಜೀವಬೆದರಿಕೆ ಖಂಡಿಸಿ ಚಿತ್ತಾಪುರ ಬಂದ್ ವೇಳೆ ಕೀಟನಾಶಕ ಸೇವಿಸಿ ಅಭಿಮಾನಿ ಆತ್ಮಹತ್ಯೆಗೆ ಯತ್ನ
ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆರಿಗೆ ಜೀವ ಬೆದರಿಕೆ ಹಾಕಿದ ಘಟನೆ ಖಂಡಿಸಿ ಇಂದು ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣ ಬಂದ್ಗೆ ಕರೆ ನೀಡಲಾಗಿತ್ತು.. ಬಂದ್ ಪ್ರತಿಭಟನೆ ವೇಳೆ ಪ್ರಿಯಾಂಕ್ ಖರ್ಗೆ ಅಭಿಮಾನಿಯಿಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಕ್ಟೋಬರ್ 16 ರಂದು ಮಧ್ಯಾನ 2 ಗಂಟೆಗೆ ನಡೆದಿದೆ.. ಸಾಬಣ್ಣ ಭರಟೆ ಎಂಬಾತ ಪ್ರತಿಭಟನೆ ವೇಳೆ ಏಕಾಏಕಿ ಕೀಟನಾಶಕ ಕುಡಿಯಲು ಯತ್ನಿಸಿದ್ದ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರು ತಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವುಸಿಲ್ಲ..