ಚಿತ್ರದುರ್ಗ: ನಾಯಕ ಸಮುದಾಯಕ್ಕೆ ಒಳ ಮೀಸಲಾತಿ ನೀಡಿ, ಬೇರೆ ಸಮುದಾಯ ಸೇರ್ಪಡೆ ಮಾಡಿ: ಚಿತ್ರದುರ್ಗದಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಒತ್ತಾಯ
ಕುರುಬ ಸಮುದಾಯವನ್ನ ST ಪಟ್ಟಿಗೆ ಸೇರಿಸುವ ವಿಚಾರಕ್ಕೆ ಚಿತ್ರದುರ್ಗದಲ್ಲಿ ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತ್ನಾಡಿದ ಅವರು ನಾಯಕ ಜನಾಂಗಕ್ಕೆ ಒಳ ಮೀಸಲಾತಿಯನ್ನ ಮೊದಲು ಕೊಡಲಿ, ಬಳಿಕ ಯಾವುದೇ ಸಮುದಾಯವನ್ನ ಸರ್ಕಾರ ST ಪಟ್ಟಿಗೆ ಸೇರ್ಪಡೆ ಮಾಡಲಿ ಎಂದರು. ಕುರುಬ, ಗೊಲ್ಲ ಸಮುದಾಯ ST ಪಟ್ಟಿಗೆ ಸೇರಿಸುವುದು ಸಂತೋಷ, ಆದರೆ. ಅವರರಿಗೆ OBC ಪಟ್ಟಿಯಲ್ಲಿ ಸಿಗುತ್ತಿರುವ ಮೀಸಲಾತಿ ಶೇಕಡಾವಾರು ನಮ್ಮ ST ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಮೊದಲು ಒಳ ಮೀಸಲಾತಿ ನೀಡಬೇಕು, ಎಲ್ಲಾ ಸಮುದಾಯದಕ್ಕೂ ನಿಗಮ ಮಂಡಳಿ ಮಾಡಿದ್ದಾರೆ,