ಬಾಗಲಕೋಟೆ: ನವನಗರದಲ್ಲಿ ಯುವತಿ ಕಾಣೆ,ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಹಿಳೆಯೊಬ್ಬರು ಕಾಣೆಯಾಗಿರುವ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂ.51 ರಲ್ಲಿ ನಡೆದಿದೆ.ಕಾಣೆಯಾದ ಮಹಿಳೆಯನ್ನ ಫಜೀಲಾಗಜಾಲಾ(25) ಎಂದು ಗುರ್ತಿಸಲಾಗಿದೆ.ಕಳೆದ ಏಪ್ರೀಲ್ 17. ರಂದು ಮನೆಯಿಮದ ಹೊರಗೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆ ವಾಪಸ್ಸು ಮನೆಗೆ ಬಂದಿಲ್ಲ.ಇದುವರೆಗೂ ಹುಡುಕಾಡಿದರೂ ಸಿಗದಿರುವ ಕಾರಣ ಪೋಷಕರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.