ಮಳವಳ್ಳಿ : ಮಳವಳ್ಳಿ ಟಿಎಪಿಸಿಎಂಎಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ ಲಿಂಗರಾಜು ಅವರನ್ನು ಸನ್ಮಾ ನಿಸುವ ಕಾರ್ಯಕ್ರಮವೊಂದು ಮಳವಳ್ಳಿ ತಾಲ್ಲೂಕಿನ ಕಾಳಕೆಂಪನ ದೊಡ್ಡಿ ಗ್ರಾಮದ ಹೊರವಲಯ ದಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಾಡಾಗಿತ್ತು. ಶನಿವಾರ ಸಂಜೆ 6.30 ರ ಸಮಯ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಲಮಾಕನಹಳ್ಳಿ ಗ್ರಾಮ ಪಂಚಾ ಯ್ತಿ ವ್ಯಾಪ್ತಿಯ ಗ್ರಾಮಗಳ ಕಾಂಗ್ರೆಸ್ ಮುಖಂಡರು ಟಿಎಪಿಸಿ ಎಂಎಸ್ ನ ನೂತನ ಅಧ್ಯಕ್ಷ ಲಿಂಗರಾಜು ಅವರನ್ನು ಹಾರ ತುರಾಯಿಗಳೊಂದಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಅಭಿ ನಂದಿಸಿದರು.