ಮೊಳಕಾಲ್ಮುರು:-ಎಸ್ಎಸ್ಎಲ್ಸಿ ಫಲಿತಾಂಶ ವೃದ್ಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾಲಕರ ಸಹಕಾರವನ್ನೂ ಸಹ ಪಡೆಯುವ ಅಗತ್ಯವಿದೆ ಎಂದು ಡಿಡಿಪಿಐ ಎಂ.ಆರ್. ಮಂಜುನಾಥ್ ಸಲಹೆ ಮಾಡಿದರು. ಇಲ್ಲಿನ ಪಿಎಂಶ್ರೀ ಆದರ್ಶ ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ಶಿಕ್ಷಣ ಇಲಾಖೆಯು ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ತಾಲ್ಲೂಕಿನ ಮುಖ್ಯಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತ ಮಕ್ಕಳಲ್ಲಿ ಇರಬಹುದಾದ ಕಲಿಕಾ ನೂನ್ಯತೆಗಳನ್ನು ಗುರುತಿಸಿ ಪಾಲಕರ ಗಮನಕ್ಕೆ ತರಬೇಕು. ಮನೆಯಲ್ಲಿ ಮೊಬೈಲ್, ಟಿವಿ ಹಾವಳಿಯಿಂದ ದೂರ ಇಡುವಂತೆ ಮನವರಿಕೆ ಮಾಡಿಕೊಡಬೇಕು ಎಂದರು.