ಅಫಜಲ್ಪುರ: ಆರ್ಎಸ್ಎಸ್ ಬ್ಯಾನ್ಗೆ ಕಾಂಗ್ರೆಸ್ನಿಂದಲೇ ಬ್ಯಾನ್ಗೆ ಪತ್ರ: ಇತ್ತ ಅಫಜಲಪುರ ಕಾಂಗ್ರೆಸ್ ಶಾಸಕರ ಶಾಲೆಯಲ್ಲೆ ಆರ್ಎಸ್ಎಸ್ ಪಥಸಂಚಲನ
ಕಲಬುರಗಿ : ರಾಜ್ಯದಲ್ಲಿ ಆರ್ಎಸ್ಎಸ್ ಬ್ಯಾನ್ ಮಾಡಿ ಅಂತಾ ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ಬೆನ್ನಲ್ಲೆ ಇತ್ತ ಸಚಿವ ಖರ್ಗೆ ಕ್ಷೇತ್ರದಲ್ಲೆ ಕಾಂಗ್ರೆಸ್ ಶಾಸಕರ ಅಧ್ಯಕ್ಷತೆಯ ಶಾಲೆಯಲ್ಲಿ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿರೋ ಘಟನೆ ನಡೆದಿದೆ.. ಅ13 ರಂದು ಬೆಳಗ್ಗೆ 10 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಅಫಜಲಪುರ ಕಾಂಗ್ರೆಸ್ ಶಾಸಕ ಎಮ್ವೈ ಪಾಟೀಲ್ ಅಧ್ಯಕ್ಷತೆಯ ಅಫಜಲಪುರ ಪಟ್ಟಣದಲ್ಲಿರೋ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿರೋದು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಜುಗರ ತಂದಿಟ್ಟಿದೆ..