ಚಡಚಣ: ಪಟ್ಟಣದ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕರಣ ಮಾಧ್ಯಮಕ್ಕೆ ಮಹತ್ವದ ಹೇಳಿಕೆ ನೀಡಿದ ಎಸ್ ಪಿ ಲಕ್ಷ್ಮಣ್ ನಿಂಬರಗಿ
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿರುವ ಎಸ್ ಬಿ ಐ ಬ್ಯಾಂಕ್ ದರೊಡೆ ಪ್ರಕರಣ ಸಂಭಂಧಪಟ್ಟಂತೆ ವಿಜಯಪುರ ಎಸ್ ಪಿ ಲಕ್ಷ್ಮಣ ನಿಂಬರಗಿ ಬುಧುವಾರ ಮಧ್ಯಾಹ್ನ 2ಗಂಟೆ ಸುಮಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಬ್ಯಾಂಕಿನಲ್ಲಿ ಇದ್ದ ಒಂದು ಕೋಟಿ ನಾಲ್ಕು ಲಕ್ಷ ನಗದು ಮತ್ತು ಇಪ್ಪತ್ತು ಕೆಜಿ ಚಿನ್ನಾಭರಣದೊಂದಿಗೆ ದರೋಡೆಕೋರರು ಪರಾರಿ ಆಗಿದ್ದು ಎಂಟು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ ಮಹಾರಾಷ್ಟ್ರದ ಹುಲಜಂತಿ ಹೊರವಲಯದಲ್ಲಿ ದರೋಡೆಕೋರರು ವಾಹನ ಬಿಟ್ಟು ಪರಾರಿ ಆಗಿದ್ದು ಅತಿ ಶೀಘ್ರದಲ್ಲಿ ದರೋಡೆಕೋರರನ್ನು ಬಂಧಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.