ಹನೂರು: ಧಾರಾಕಾರ ಮಳೆಗೆ ಹನೂರಿನಲ್ಲಿ ಆತಂಕ: ತಟ್ಟೆಹಳ್ಳ ನೀರು ನುಗ್ಗುವ ಭೀತಿ, ಮನೆಗಳಿಗೆ ತೊಂದರೆ
ಹನೂರು ಪಟ್ಟಣದಲ್ಲಿ ಶನಿವಾರ ರಾತ್ರಿ ಪೂರ್ತಿ ಸುರಿದ ಧಾರಾಕಾರ ಮಳೆಯಿಂದಾಗಿ ತಟ್ಟೆಹಳ್ಳದ ಮೂಲಕ ಹರಿದ ನೀರಿನ ರಭಸತೆಯ ಪರಿಣಾಮ ಸಮೀಪದ ಮನೆಗಳ ಹಿಂಬಾಗಗಳಿಗೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಹಲವು ವರ್ಷಗಳ ನಂತರ, ಪಟ್ಟಣದ ಮಧ್ಯ ಭಾಗದಲ್ಲಿ ಈ ಮಟ್ಟದ ನೀರಿನ ಹರಿವು ಕಾಣಿಸಿಕೊಂಡಿದ್ದು, ಜನರಲ್ಲಿ ಸಂತಸ ಮೂಡಿಸಿದೆ. ವಿಶೇಷವಾಗಿ ಏಳನೆ ವಾರ್ಡ್‌ನ ಕೆಲ ಮನೆಗಳ ಹಿಂಬಾಗಕ್ಕೆ ನೀರು ಚಾಚಿಕೊಂಡಿದೆ. ಮಳೆ ಇನ್ನಷ್ಟು ಮುಂದುವರೆದರೆ ಈ ಮನೆಗಳಿಗೆ ನೇರವಾಗಿ ನೀರು ನುಗ್ಗುವ ಸಂಭವವಿದೆ ಎಂಬ ಲಕ್ಷಣಗಳು ಕಂಡು ಬರುತ್ತಿವೆ. ಹಿ