ಬಾಗೇಪಲ್ಲಿ: ವಿಶ್ವಕರ್ಮರು ದೈವಿಕ ವಾಸ್ತುಶಿಲ್ಪಿ ದೇವರು-ಪಟ್ಟಣದಲ್ಲಿ ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ
ವಿಶ್ವಕರ್ಮ ಅಥವಾ ವಿಶ್ವಕರ್ಮನ್, ಒಬ್ಬ ಸಮಕಾಲೀನ ಹಿಂದೂ ಧರ್ಮದಲ್ಲಿ ಕುಶಲಕರ್ಮಿ ಮತ್ತು ದೈವಿಕ ವಾಸ್ತುಶಿಲ್ಪಿ ದೇವರು.ವಿಶ್ವಕರ್ಮ ಎಂಬ ಪದವನ್ನು ಮೂಲತಃ ಯಾವುದೇ ಶಕ್ತಿಯುತ ದೇವತೆಗೆ ಒಂದು ಹೆಸರಾಗಿ ಬಳಸಲಾಗುತ್ತದೆ. ನಂತರದ ಅನೇಕ ಸಂಪ್ರದಾಯಗಳಲ್ಲಿ, ವಿಶ್ವಕರ್ಮ ಕುಶಲಕರ್ಮಿ ದೇವರ ಹೆಸರಾಯಿತು ಎಂದು ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು