ಮಸ್ಕಿ: ಲೋಕಸಭಾ ಚುನಾವಣೆ ಹಿನ್ನೆಲೆ ಮಸ್ಕಿ ತಹಶೀಲ್ದಾರ್ ಕಚೇರಿಯಲ್ಲಿ ಇವಿಎಂ ಮತಯಂತ್ರಗಳ ಕುರಿತು ತರಬೇತಿ
Maski, Raichur | Mar 28, 2024 ಲೋಕಸಭಾ ಸಾರ್ವತ್ರಿಕಾ ಚುನಾವಣೆ-2024 ಹಿನ್ನೆಲೆ ಮಸ್ಕಿ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕರ್ತವ್ಯನಿರತ ಅಧಿಕಾರಿಗಳಿಗೆ ಇವಿಎಂ ಮತಯಂತ್ರಗಳ ಬಳಕೆ ಕುರಿತು ತರಬೇತಿಯನ್ನು ಮಾ.28ರ ಗುರುವಾರ ನೀಡಲಾಯಿತು. ಈ ವೇಳೆ ಸಹಾಯಕ ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರು, ತಹಶೀಲ್ದಾರ್ ಸುಧಾ ಅರಮನೆ, ಗ್ರೇಡ್-2 ತಹಶೀಲ್ದಾರ್, ಮಸ್ಕಿ ವ್ಯಾಪ್ತಿಯ 18 ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್ಗಳು ಪಾಲ್ಗೊಂಡಿದ್ದರು.