ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು ನನ್ನ ವಿರೋಧವಿಲ್ಲ, ನಗರದಲ್ಲಿ ಸಚಿವ ಎಂಬಿ ಪಾಟೀಲ ಹೇಳಿಕೆ
ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು ನನ್ನದು ಯಾವುದೇ ವಿರೋಧವಿಲ್ಲ ಕೆಲವು ಕುತಂತ್ರಿಗಳು ಇಲ್ಲಸಲ್ಲದ ನನ್ನ ಮೇಲೆ ಆರೋಪಗಳು ಮಾಡುತ್ತಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಿದರೆ ಬಿ ಎಲ್ ಡಿ ಇ ವೈದ್ಯಕೀಯ ಕಾಲೇಜಿಗೆ ತೊಂದರೆಯಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮದು ದಿಮ್ಡ್ ಯುನಿವರ್ಸಿಟಿ 10 ವೈದ್ಯಕೀಯ ಕಾಲೇಜಿನ ನಿರ್ಮಾಣ ಮಾಡಬಹುದು. ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ನಮ್ಮ ವೈದ್ಯಕೀಯ ಕಾಲೇಜಿಗೆ ಯಾವುದೇ ತೊಂದರೆಯಾಗುವುದಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ನಾನು ಈಗಾಗಲೇ ಒತ್ತಡ ಹೇಳಿದ್ದೇನೆ ಎಂದು ವಿಜಯಪುರದಲ್ಲಿ ಸೋಮವಾರ ಮಧ್ಯಾಹ್ನ 2ಗಂಟೆ ಸುಮಾರಿಗೆ ಸಚಿವ ಎಂಬಿ ಪಾಟೀಲ್ ಪ್ರತಿಭಟನಾಕಾರರಿಗೆ ಹೇಳಿದರು.