ಸಿಂಧನೂರು: ಸುಲ್ತಾನಪುರ ಗ್ರಾಮದ ರಸ್ತೆ ರಸ್ತೆಯಲ್ಲ, ಇದೊಂದು ಕೆಸರು ಗದ್ದೆ; ಹಾಳಾದ ರಸ್ತೆ ಅಭಿವೃದ್ಧಿ ಯಾವಾಗ
ತಾಲೂಕಿನ ಜವಳಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಲ್ತಾನಪುರ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು ಕೊಚ್ಚೆಯಂತಾಗಿ ಮಾರ್ಪಟ್ಟಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ತಗ್ಗು ಗುಂಡಿಗಳಿಂದ ಕೂಡಿದೆ ಅಷ್ಟೇ ಅಲ್ಲದೆ ಮಸ್ಕಿ ಹಳ್ಳದ ಸೇತುವೆ ಕಾಮಗಾರಿ ನಡೆದ ಸಂದರ್ಭದಲ್ಲಿ ಆ ಮಾರ್ಗದ ಎಲ್ಲಾ ಸಾರಿಗೆ ಬಸ್ ಲಾರಿಗಳಯ ಇದೇ ರಸ್ತೆಯಲ್ಲಿ ಸಂಚರಿಸಿದ್ದರಿಂದ ರಸ್ತೆ ಮತ್ತಷ್ಟು ಹಾಳಾಗಿದೆ. ಈ ರಸ್ತೆಯ ಮೂಲಕ ಶ್ರೀನಿವಾಸ ಕ್ಯಾಂಪ್, ಪಗಡದಿನ್ನಿ ಕ್ಯಾಂಪ್ ಹಾಗೂ ಮಸ್ಕಿ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರಾದ ವೀರೇಶ್ ಗುರುವಾರ ಪ್ರಕಟಣೆ ನೀಡಿ ಒತ್ತಾಯಿಸಿದ್ದಾರೆ.