ಹಳಿಯಾಳ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಹಿತಸಂರಕ್ಷಣಾ ಸಮಿತಿ ಹಾಗೂ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಹಳಿಯಾಳ ಪಟ್ಟಣದಲ್ಲಿರುವ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯು ಭಾನುವಾರವು ಮುಂದುವರಿದಿದೆ. ಭಾನುವಾರದ ಈ ಅಹೋರಾತ್ರ ಧರಣಿಯಲ್ಲಿ ಕಲಘಟಕಿಯ ಹಿರಿಯ ರೈತರಾಗಿರುವ ಉಳುವಪ್ಪನವರು ಭಾಗವಹಿಸಿದ್ದರು. ಈ ಅಹೋರಾತ್ರಿ ಧರಣಿಯು ಭಾನುವಾರ ರಾತ್ರಿ 10:00 ಗಂಟೆಯ ನಂತರವೂ ಮುಂದುವರೆದಿದೆ.