ಬಾಗಲಕೋಟೆ: ಒಡೆಯೋದು ಜಾತಿ,ಕೂಡಿಸೋದು ಧರ್ಮ ,ನಗರದಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಒಡೆಯೋದು ಜಾತಿ, ಕೂಡಿಸೋದು ಧರ್ಮ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಹೇಳಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು,ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿಸಿದಂತೆ, ಯಾವಾಗ ಯಾವಾಗ ಕಾಂಗ್ರೆಸ್ ಸರ್ಕಾರ ಇರುತ್ತೆ,ಆವಾಗ ಗೋಂದಲ ಇರುತ್ತೆ ದೇವರಾಜ ಅರಸರ ಕಾಲದಿಂದಲೂ ಇದು ಗೊಂದಲ ಆಗುತ್ತಲೇ ಬಂದಿದೆ ಎಂದರು.ಒಡೆಯೋದು ಜಾತಿ ಕೂಡಿಸೋದು ಧರ್ಮ ಅದಕ್ಕಾಗಿ ನಾವೆಲ್ಲ ಒಂದಾಗಿ ಹೋಗಬೇಕು ಎಂದು ಅವರು ಹೇಳಿದ್ದು,ಇನ್ನು ಈ ಸಂದರ್ಭದಲ್ಲಿ ಮಾತನಾಡಿದ್ದು ಹೀಗೆ.