ತೀರ್ಥಹಳ್ಳಿ: ತೀರ್ಥಹಳ್ಳಿಯ ಸ್ಮಶಾನ ಕಟ್ಟೆ ಬಳಿಯ ತುಂಗಾ ನದಿಯಲ್ಲಿ ಶವ ಪತ್ತೆ
ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಶವವೊಂದು ಪತ್ತೆಯಾಗಿದೆ. ಮಂಗಳವಾರ ತೀರ್ಥಹಳ್ಳಿ ಪಟ್ಟಣದ ಸ್ಮಶಾನ ಕಟ್ಟೆ ಸಮೀಪದ ತುಂಗಾ ನದಿಯಲ್ಲಿ ಅಪರಿಚಿತ ಪುರುಷನ ಶವವೊಂದು ಪತ್ತೆಯಾಗಿದೆ. ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದು ಮುಖ ಚಹರೆ ನೀರಿನಲ್ಲಿ ಮುಳುಗಿರುವುದರಿಂದ ತಿಳಿದಿಲ್ಲ.ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪರಿಚಿತ ವ್ಯಕ್ತಿ ಯಾರು? ಏನು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿಯಬೇಕಿದೆ.