ಚಿಟಗುಪ್ಪ: ಚಾಂಗ್ಲೆರಾದಲ್ಲಿ ವೀರಭದ್ರೇಶ್ವರ ಜಾತ್ರೆಯ ಹಿನ್ನೆಲೆ ಅಗ್ನಿಕುಂಡ ಪ್ರದಕ್ಷಿಣೆ ಹಾಕಿ ಭಕ್ತಿಸೇವೆ ಸಮರ್ಪಿಸಿದ ಸಹಸ್ರಾರು ಭಕ್ತಾದಿಗಳು
ತಾಲೂಕಿನ ಇತಿಹಾಸ ಪ್ರಸಿದ್ಧ ಭಕ್ತರ ಇಷ್ಟಾರ್ಥವನ್ನು ಪೂರೈಸುವ ಚಂಗೇರದ ಪವಿತ್ರ ಧಾರ್ಮಿಕ ಕ್ಷೇತ್ರ ಶ್ರೀ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಬುಧವಾರ ಬೆಳಗಿನ ಜಾವ 5:21ಕ್ಕೆ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವದ ಜೊತೆಗೆ ಭಕ್ತಾದಿಗಳು ಅಗ್ನಿಕುಂಡ ಪ್ರದಕ್ಷಿಣೆ ಹಾಕಿ ಭಕ್ತಿಸೇವೆ ಸಮರ್ಪಿಸಿದರು. ವೈವಿಧ್ಯಮಯ ವಾದ್ಯವ್ರಂದ, ಪುರವಂತಿಕೆ ನೃತ್ಯ, ಶಾಲಾ ಮಕ್ಕಳ ಕೋಲಾಟ, ವಿವಿಧ ಭಜನೆ ತಂಡಗಳ ಸೇವೆ ಮೆರವಣಿಗೆಯ ಮೆರವ ಹೆಚ್ಚಿಸಿದವು.