ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು 150ಕ್ಕೂ ಹೆಚ್ಚು ಅಶ್ಲೀಲ ಕಾಮೆಂಟ್ಗಳನ್ನು ಮಾಡಿದ್ದ 15 ಇನ್ ಸ್ಟಾಗ್ರಾಂ ಐಡಿಗಳ ವಿರುದ್ಧ ಸಿಸಿಬಿ ಜಂಟಿ ಆಯುಕ್ತ ಅಜಯ್ ಹಿಲೋರಿಗೆ ಬುಧವಾರ ದೂರು ನೀಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಫ್ಯಾನ್ಸ್ ವಾರ್ನ ಬೆನ್ನಲ್ಲೇ, ಸುದೀಪ್ ಅಭಿಮಾನಿಗಳ ಹೆಸರಿನಲ್ಲಿ ವಿಜಯಲಕ್ಷ್ಮೀ ಅವರಿಗೆ ಅಶ್ಲೀಲ ಪದಗಳನ್ನು ಬಳಸಿ ಕಾಮೆಂಟ್ಗಳು ಬರುತ್ತಿದ್ದವು. ಸಾಕ್ಷಿಗಳ ಸಮೇತ ದೂರು ನೀಡಿರುವ ವಿಜಯಲಕ್ಷ್ಮೀ, ಆರೋಪಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ನಟಿ ರಮ್ಯಾ ಕೂಡ ಇಂತಹ ಕಾಮೆಂಟ್ಗಳ ವಿರುದ್ಧ ದೂರು ನೀಡಿದ್ದು, ಪರಿಣಾಮ ಕೆಲವರು ಜೈಲು ಶಿಕ್ಷೆ ಅನುಭವಿಸಿದ್ದರು.