ಭಾಲ್ಕಿ: ಪಟ್ಟಣದ ಪುರ ಭವನದಲ್ಲಿ ಸಕಲ ಮರಾಠಾ ಸಮಾಜದಿಂದ ಸಭೆ ಜರುಗಿತು. ಕಾರ್ಮಿಕ ಸಚಿವ ಸಂತೋಷ ಲಾಡ್ ಭಾಗವಹಿಸಿ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ದಿಗಂಬರಾವ ಮಾನಕಾರಿ, ಜಿಪಂ ಮಾಜಿ ಅಧ್ಯಕ್ಷ ಅನಿಲ ಭುಸಾರೆ, ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಜನಾರ್ದನ ಬಿರಾದಾರ, ಡಾ: ದಿನಕರ ಮೋರೆ, ಕಿಶನರಾವ ಇಂಚೂರಕರ ಸೇರಿದಂತೆ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು.