ಭಾಲ್ಕಿ: ತನ್ನ ತಂದೆಯೊಂದಿಗೆ ಬೈಕ್ ಮೇಲೆ ತೆರಳುತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ್ ಟಿಟಿವಾಹನವೊಂದು ಡಿಕ್ಕಿಯಾಗಿದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಬಿಕೆಐಟಿ ಕಾಲೇಜಿನ ಬಳಿ ಜರುಗಿದೆ. ಹುಮನಾಬಾದ ತಾಲೂಕಿನ ಮುಗನೂರ ಗ್ರಾಮದ ನಿವಾಸಿ ಸಂದ್ಯಾರಾಣಿ ಹಲಗೆ(3) ಘಟನೆಯಲ್ಲಿ ಮೃತಪಟ್ಟ ಬಾಲಕಿಯಾಗಿದ್ದಾಳೆ. ಈ ಕುರಿತು ಭಾಲ್ಕಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ