ಮುಳಬಾಗಿಲು: ಪವತಿ ಖಾತೆ ಆಂದೋಲನ ಗ್ರಾಮೀಣ ಭಾಗದ ರೈತರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಆವಣಿ ಗ್ರಾಮದಲ್ಲಿ ತಹಶೀಲ್ದಾರ್ ವಿ.ಗೀತಾ
Mulbagal, Kolar | Nov 18, 2025 ಪವತಿ ಖಾತೆ ಆಂದೋಲನ ಗ್ರಾಮೀಣ ಭಾಗದ ರೈತರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಆವಣಿ ಗ್ರಾಮದಲ್ಲಿ ತಹಶೀಲ್ದಾರ್ ವಿ.ಗೀತಾ ಪೌತಿ ಖಾತೆಯ ಮೂಲಕ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಕುಟುಂಬದ ಸದಸ್ಯರು ವರ್ಗಾವಣೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಗ್ರಾಮೀಣ ಭಾಗದ ರೈತರು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ತಹಶೀಲ್ದಾರ್ ವಿ.ಗೀತಾ ಹೇಳಿದರು. ಮುಳಬಾಗಿಲು ತಾಲ್ಲೂಕಿನ ಆವಣಿ ನಾಡಕಚೇರಿ ಮುಂಭಾಗದಲ್ಲಿ ಮಂಗಳವಾರ ಕಂದಾಯ ಇಲಾಖೆಯ ವತಿಯಿಂದ ಹಮ್ಮಿಕೊಂಡ ಪವತಿ ಖಾತೆ ಆಂದೋಲನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದರ ಮುಖ್ಯ ಉದ್ದೇಶ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು, ಏಕೆಂದರೆ ಪೌತಿ ಖಾತೆ ಹೊಂದಿರದ ರೈತ