ಹಾಸನ: ನಗರದ ಹುಡಾ ಕಚೇರಿಯಲ್ಲಿ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ
Hassan, Hassan | Oct 2, 2025 ಹಾಸನ: ನಗರದ ಬಿ.ಎಂ. ರಸ್ತೆ ಬದಿ ಇರುವ ನಗರಾಭಿವೃದ್ಧಿ ಕಚೇರಿ ಆವರಣದಲ್ಲಿ ಗುರುವಾರ ಮಹಾತ್ಮ ಗಾಂಧೀಜಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನೂತನ ಹುಡಾ ಅಧ್ಯಕ್ಷರಾದ ಪಟೇಲ್ ಶಿವಣ್ಣ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಪಟೇಲ್ ಶಿವಣ್ಣ ಮಾತನಾಡಿ, ಮಹಾತ್ಮ ಗಾಂಧೀಜಿ ನೀಡಿರುವ ಸಂದೇಶಗಳು ಇಂದಿಗೂ ಪ್ರಸ್ತುತ. ಅವರು ಹೋರಾಡಿದ ಸ್ವಾತಂತ್ರ್ಯ, ಗ್ರಾಮರಾಜ್ಯ-ಸ್ವರಾಜ್ಯ, ಸ್ವಚ್ಛ ಭಾರತ, ಶಿಕ್ಷಣ ಮತ್ತು ಮಹಿಳೆಯರ ಶಕ್ತೀಕರಣ ? ಇವೆಲ್ಲವೂ ಪ್ರಜಾಪ್ರಭುತ್ವದಲ್ಲಿ ಅವಶ್ಯಕವಾದ ಮೌಲ್ಯಗಳು. ಗಾಂಧೀಜಿಯವರ ಕನಸು ಇಂದಿಗೂ ನಾವೆಲ್ಲರ ಜವಾಬ್ದಾರಿಯಿಂದ ಸಾಕಾರವಾಗುತ್ತಿದೆ ಎಂದರು.