ಶಿರಸಿ: ಮತ್ತಿಘಟ್ಟಾ ಜಲಪಾತದಲ್ಲಿ ಮೃತಪಟ್ಟ ಉಂಚಳ್ಳಿ ಯುವಕನ ಮನೆಗೆ ಶಾಸಕ ಹೆಬ್ಬಾರ್ ಭೇಟಿ, ಸಾಂತ್ವನ
ಶಿರಸಿ : ಇತ್ತೀಚಿಗೆ ಮತ್ತಿಘಟ್ಟಾ ಜಲಪಾತದಲ್ಲಿ ಬಿದ್ದು ಬನವಾಸಿ ಹೋಬಳಿ ವ್ಯಾಪ್ತಿಯ ಉಂಚಳ್ಳಿ ಗ್ರಾಮದ ಯುವಕ ಪವನ ಗಣಪತಿ ಜೋಗಿ ಮೃತಪಟ್ಟ ಅಹಿತಕರ ಘಟನೆ ಸಂಭವಿಸಿತ್ತು. ಈ ಹಿನ್ನಲೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮಂಗಳವಾರ ಮೃತ ಯುವಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಬನವಾಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಿಕಟಪೂರ್ವ ಅಧ್ಯಕ್ಷ ಸಿ.ಎಫ್.ನಾಯ್ಕ, ಬ್ಲಾಕ್ ಸಮಿತಿಯ ಅಧ್ಯಕ್ಷ ಗಣಪತಿ ನಾಯ್ಕ ಸೇರಿದಂತೆ ಸ್ಥಳೀಯ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.