ಶಿರಸಿ: ಗಣೇಶ ನಗರ ಸೇರಿ ವಿವಿಧ ವಾರ್ಡ್‌ಗಳಿಗೆ ಶಾಸಕ ಭೀಮಣ್ಣ ಭೇಟಿ, ಮಳೆ ಹಾನಿ ಪರಿಶೀಲನೆ
ಶಿರಸಿ : ಅಬ್ಬರದ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಿರಸಿ ನಗರ ಭಾಗದ ಸ್ಥಿತಿ ಗತಿ ಜನರ ಸಮಸ್ಯೆಗಳನ್ನು ಆಲಿಸಲು ಶಾಸಕ ಭೀಮಣ್ಣ ನಾಯ್ಕ ಬುಧವಾರ ವಿವಿಧ ವಾರ್ಡುಗಳಿಗೆ ಭೇಟಿ ನೀಡಿದರು. ನಗರಸಭೆಯ ವಾರ್ಡ ನಂ.೧ ಮತ್ತು ೨ ಸೇರಿದಂತೆ ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶನಗರ, ಪುಟ್ಡನಮನೆ, ಕುಂಬ್ರಿತಗ್ಗು ಭಾಗದ ಮಳೆಹಾನಿ ಪ್ರದೇಶಗಳನ್ನು ಶಾಸಕರು ವೀಕ್ಷಿಸಿದರು. ಬಳಿಕ ಮಾತನಾಡಿ ನಗರ ಹಾಗೂ ಗ್ರಾಮೀಣ ಭಾಗದ ವಿವಿಧ ಕಡೆ ಭೂಮಿ ಕುಸಿದು ಜನವಸತಿಗೆ ತೊಂದರೆ ಆಗುತ್ತಿದ್ದು, ಅಂಥ ಜಾಗದ ನಿವಾಸಿಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಸರ್ಕಾರದೆದುರು ಪ್ರಸ್ತಾವ ಇಡಲಾಗುವುದು ಎಂದರು.