ಚಿತ್ರದುರ್ಗ: ಚಿತ್ರದುರ್ಗದಲಗಲಿ ರೇಬಿಸ್ ರೋಗ ತಡೆಗಟ್ಟುವಿಕೆ ಕುರಿತು ಕಾರ್ಯಗಾರ
ಮುಂಬರುವ ದಿನಗಳಲ್ಲಿ ಗ್ರಾ.ಪಂ.ಸಹಯೋಗದೊಂದಿಗೆ ಬೀದಿ ಬದಿಯ ನಾಯಿಗಳಿಗೆ ಲಸಿಕೆಯನ್ನು ಹಾಕಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎನ್.ಕುಮಾರ್ ಹೇಳಿದರು. ಜಿಲ್ಲಾ ಪಂಚಾಯತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಹಾಗೂ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಸಹಯೋಗದಲ್ಲಿ ನಗÀರದ ಒನಕೆ ಓಬವ್ವ ಕ್ರೀಡಾ ಭವನದಲ್ಲಿ ಶುಕ್ರವಾರ ಪಶು ವೈದ್ಯಕೀಯ ಪರಿವೀಕ್ಷಕರಿಗೆ ಹಮ್ಮಿಕೊಂಡಿದ್ದ ತಾಂತ್ರಿಕ ಸಮ್ಮೇಳನ ಹಾಗೂ ರೇಬಿಸ್ ರೋಗ ತಡೆಗಟ್ಟುವಿಕೆ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೇವಲ 8 ರಿಂದ 10 ರೇಬಿಸ್ ಪ್ರಕರಣಗಳು ದಾಖಲಾಗುತ್ತಿವೆ ಎಂದರು