ಹುಮ್ನಾಬಾದ್: ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ಅಳವಳಿಸಿದ ಲಿಫ್ಟ್ ಬಳಕೆಗೆ ಯೋಗ್ಯ ಸ್ಥಿತಿಗೆ ತಂದು ಸಿಸಿ ಕ್ಯಾಮೆರಾ ಅಳವಡಿಸಲು ನಗರದಲ್ಲಿ ಸಾರ್ವಜನಿಕರ ಆಗ್ರಹ
Homnabad, Bidar | Nov 11, 2025 ನಗರದ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ಇರುವ ಲಿಫ್ಟ್ ಬಳಕೆಗೆ ಯೋಗ್ಯ ಸ್ಥಿತಿಗೆ ತರುವುದರ ಜೊತೆಗೆ ಇಡೀ ಕಟ್ಟಡದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಲಿಫ್ಟ್ ಬಳಕೆಗೆ ಯೋಗ್ಯ ಇಲ್ಲದಿರುವುದು ಮತ್ತು ಸಿಸಿ ಕ್ಯಾಮೆರಾ ಇಲ್ಲದಿರುವ ಕಾರಣ ಬೇಕಾ ಬಿಟ್ಟಿಯಾಗಿ ಜನರು ಬಂದು ಕುಳಿತುಕೊಳ್ಳುವ ಮೂಲಕ ಗೆಸ್ಟ್ ಹೌಸ್ ನ ಪರಿಸರ ಅಶುದ್ಧಗೊಳಿಸುತ್ತಿದ್ದಾರೆ. ಕಾರಣ ಸಂಬಂಧಪಟ್ಟವರು ಶೀಘ್ರ ಲಿಫ್ಟನ್ನ ಬಳಕೆಗೆ ಯೋಗ್ಯ ಸ್ಥಿತಿಗೆ ತರುವುದರ ಜೊತೆಗೆ ಇಡೀ ಕಟ್ಟಡದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗೌತಮ್ ಚೌಹಾಣ್ ಶೇಡೊಳ ಅವರು ಈ ಮೂಲಕ ಮಂಗಳವಾರ ಮಧ್ಯಾಹ್ನ 3:30ಕ್ಕೆ ಅಗ್ರಹಿಸಿದರು.