ದೊಡ್ಡಬಳ್ಳಾಪುರ ತಾಲ್ಲೂಕಿನ ಮನೆ ಮನೆಯಲ್ಲಿ ತುಳಸಿ ಹಬ್ಬವನ್ನು ವಿಜೃಂಭಣೆಯಿಂದ ಮಹಿಳೆಯರು ಆಚರಣೆ ಮಾಡಿದ್ದು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ತುಳಸಿ ದೇವಿಯನ್ನು ಲಕ್ಷ್ಮಿ ಪೂಜೆಯನ್ನು ತುಳಸಿ ಹಬ್ಬವೆಂದೂ ಆಚರಿಸಲಾಗುತ್ತದೆ. ತುಳಸಿ ಪೂಜೆಯು ಹಿಂದೂ ಧರ್ಮದ ಅತ್ಯಂತ ಪೂಜನೀಯ ಹಬ್ಬವಾಗಿದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ತುಳಸಿ ಪೂಜೆಯ ದಿನದಂದು ವಿಷ್ಣುವಿನ ರೂಪವಾದ ಸಾಲಿಗ್ರಾಮದೊಂದಿಗೆ ತುಳಸಿಗೆ ವಿವಾಹವನ್ನು ಮಾಡಿಸುವ ಸಂಪ್ರದಾಯವಿದೆ. ತುಳಸಿ ಪೂಜೆಯು ಚಾತುರ್ಮಾಸದ ಅಂತ್ಯವನ್ನು ಸೂಚಿಸುತ್ತದೆ. ತುಳಸಿ ಪೂಜೆಯ ದಿನದಂದು ಶ್ರದ್ಧಾ - ಭಕ್ತಿಯಿಂದ ತುಳಸಿ ಸಸ್ಯವನ್ನು ಪೂಜಿಸುವುದರಿಂದ ಲಕ್ಷ್ಮಿ ನಾರಾಯಣರ ಕೃಪೆ ನಿಮ್ಮ ಮೇಲಿರುವುದು. 2025ರ ತುಳಸಿ ಪೂಜೆಯ ಕುರಿ