ಕಾರ್ತೀಕ ಮಾಸದ ಹಿನ್ನಲೆ ಮಂತ್ರಾಲಯದ ಶ್ರೀ ಅಭಯ ಆಂಜನೇಯ ಸ್ವಾಮಿ ಸನ್ನಿಧಾನದಲ್ಲಿ ಪವಿತ್ರ ಧಾತ್ರೀ ಹೋಮವು ನೆರವೇರಿಸಲಾಯಿತು. ಸೋಮವಾರ 12 ಹೆಚ್.ಹೆಚ್. ಶ್ರೀ ಸ್ವಾಮೀಜಿ ಶ್ರೀ ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರ ಪೂಜೆ ನೆರವೇರಿಸಿ ನಂತರ ಧಾತ್ರೀ ಹೋಮದ ಪೂರ್ಣಾಹುತಿಯನ್ನು ಸಲ್ಲಿಸಿದರು. ನಂತರ ಸ್ವಾಮೀಜಿ ಶ್ರೀ ಅಭಯ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ನಂತರ ವನಭೋಜನವನ್ನು ಆಯೋಜಿಸಲಾಗಿತ್ತು. ಪೂಜೆಯಲ್ಲಿ ಅಪಾರ ಭಕ್ತರು, ಶ್ರೀ ಮಠದ ಸಿಬ್ಬಂದಿ ತೀರ್ಥ ಪ್ರಸಾದದಲ್ಲಿ ಭಾಗವಹಿಸಿ ಶ್ರೀ ಸ್ವಾಮೀಜಿಯವರ ಆಶೀರ್ವಾದಗಳನ್ನು ಪಡೆದರು