ಚಿಟಗುಪ್ಪ: ಚಾಂಗ್ಲೇರಾ ವೀರಭದ್ರೇಶ್ವರ ದೇವಸ್ಥಾನ ನೂತನ ಪುಷ್ಕರಣಿಗೆ ವಿಶೇಷ ಪೂಜೆ ಸಲ್ಲಿಸಿ, ಸೇವೆಗೆ ಸಮರ್ಪಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ
ತಾಲೂಕಿನ ಇತಿಹಾಸ ಪ್ರಸಿದ್ಧ ಚಾಂಗ್ಲೇರಾ ವೀರಭದ್ರೇಶ್ವರ ದೇವಸ್ಥಾನ ಪರಿಸರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪುಷ್ಕರಣಿಗೆ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಭಾನುವಾರ ಸಂಜೆ 4ಕ್ಕೆ ಪೂಜೆ ಸಲ್ಲಿಸಿ ಭಕ್ತರ ಸೇವೆಗೆ ಸಮರ್ಪಿಸಿದರು. ಈ ವೇಳೆ ಪೂಜ್ಯ ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿ ಮತ್ತು ವೀರಶೆಟ್ಟಿ ಬಿರಾದಾರ್ ಗಂಗವಾರ್, ಅರ್ಚಕರು ದೇವಸ್ಥಾನ ಸದ್ಭಕ್ತ ಮಂಡಳಿಯ ಸಮಸ್ತ ಪದಾಧಿಕಾರಿಗಳು ಇದ್ದರು.