ಕಲಬುರಗಿ: ಭಾರತ-ಪಾಕ್ ಕ್ರಿಕೆಟ್, ಬಿಜೆಪಿಗೆ ನಾಚಿಕೆಯಾಗಲ್ವ? ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲ
ಕಲಬುರಗಿ : ಪೆಹಲ್ಗಾಮ್ ದಾಳಿ ಬಳಿಕವು ಕೇಂದ್ರ ಸರ್ಕಾರ ಭಾರತ ಮತ್ತು ಪಾಕ್ ಮಧ್ಯೆ ಕ್ರಿಕೆಟ್ ಮ್ಯಾಚ್ ಆಡಿಸಿದಕ್ಕೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೆರಳಿ ಕೆಂಡವಾಗಿದ್ದಾರೆ.. ಸೆ15 ರಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಮಾತೆತ್ತಿದ್ರೆ ದೇಶಭಕ್ತಿ ಅನ್ನೊ ಬಿಜೆಪಿಗರು.. ನಿನ್ನೆ ಇಂಡಿಯಾ ಪಾಕ್ ಮ್ಯಾಚ್ ಆಡಿಸಿದ್ರು.. ಹುತಾತ್ಮ ಕುಟುಂಬಸ್ಥರು ಪಂದ್ಯ ಬೇಡವೆಂದು ಕಣ್ಣಿರು ಹಾಕಿದ್ರು ಸಹ ಪಂದ್ಯ ಆಡಿಸಿದ್ರು.. ಆ ತಾಯಂದಿರು ಕಣ್ಣಿರು ಹಾಕಿದ್ರು ನಿಮಗೆ ನಾಚಿಕೆ ಬರಲ್ವವೆಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ..