ದೇವದುರ್ಗ: ದೇವದುರ್ಗ : ಅಕ್ರಮ ಮರಳು ಸಾಗಾಟ ದಾಳಿ ಟ್ರ್ಯಾಕ್ಟರ್ ಜಪ್ತಿ
ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ ವೇಳೆ ಖಚಿತ ಮಾರುತಿ ಮೇರೆಗೆ ದೇವದುರ್ಗ ಪೊಲೀಸರು ದಾಳಿ ಮಾಡಿ ಟ್ರಾಕ್ಟರ್ ವಶಕ್ಕೆ ಪಡೆದ ಘಟನೆ ಜರುಗಿದೆ. ನಗರಗುಂಡ ಗ್ರಾಮದ ಸರ್ವೇ ನಂ.135 ರ ಜಮೀನಿನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿ ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದರೆ. ಈ ವೇಳೆ ಚಾಲಕನು ಪೊಲೀಸರನ್ನು ಕಂಡು ಟ್ರ್ಯಾಕ್ಟರ್ ಹಾಗೂ ಟ್ರಾಲಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಚಾಲಕ ಹಾಗೂ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.