ಕಲಬುರಗಿ: ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ: ವಿಸರ್ಜನೆಗೂ ಮುನ್ನ ಭವ್ಯ ಮೆರವಣಿಗೆ
ಕಲಬುರಗಿ : ಕಲಬುರಗಿ ನಗರದ ಕೋಟೆ ರಸ್ತೆಯಲ್ಲಿ 21 ದಿನಗಳ ಕಾಲ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯನ್ನ ಇಂದು ವಿಸರ್ಜನೆ ಮಾಡಲಾಗ್ತಿದ್ದು, ವಿಸರ್ಜನೆಗೂ ಮುನ್ನ ಬೃಹತ್ ಮೆರವಣಿಗೆ ಮಾಡಲಾಗುತ್ತಿದೆ.. ಸೆ16 ರಂದು ಮಧ್ಯಾನ 3.30 ಕ್ಕೆ ಕೋಟೆ ರಸ್ತೆಯಿಂದ ಮೆರವಣಿಗೆ ಆರಂಭವಾಗಿದ್ದು, ಸೂಪರ್ ಮಾರ್ಕೆಟ್ ಮಾರ್ಗವಾಗಿ ಮೆಹಬಾಸ್ ಮಜೀದ್ ಮೂಲಕ ಜಗತ್ ವೃತ್ತಕ್ಕೆ ಆಗಮಿಸಲಿದ್ದು, ಜಗತ್ ವೃತ್ತದಿಂದ ನಗರದ ಶ್ರೀ ಶರಣಬಸವೇಶ್ವರ ಕೆರೆ ಪಕ್ಕದಲ್ಲಿ ವಿಸರ್ಜನೆ ಮಾಡಲಾಗ್ತಿದೆ.