ಕೊಪ್ಪ: ಕುದ್ರೆಗುಂಡಿ ಸುತ್ತ ಕಾಡಾನೆ ಸಂಚಾರ.! ಜಾಗೃತೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಎರಡು ಕಾಡಾನೆಗಳ ಓಡಾಟ ನಿರಂತರವಾಗಿದ್ದು. ಆ ಎರಡು ಕಾಡಾನೆಗಳು ಕುದುರೆಗುಂಡಿ, ಬಾಳೆಹಿತ್ಲು, ಗುಡ್ಡೆ ಹಳ್ಳ ಭಾಗದಲ್ಲಿ ಓಡಾಡುತ್ತಿದ್ದು ಸಾರ್ವಜನಿಕರು ಜಾಗೃತಿಯಿಂದ ಓಡಾಡಬೇಕು ಮನೆಯಿಂದ ಮಕ್ಕಳನ್ನು ಹೊರಗೆ ಬಿಡಬಾರದು ಎಂದು ಅರಣ್ಯ ಇಲಾಖೆ ಸೂಚನೆ ಕೊಟ್ಟಿದ್ದು ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ತಿಳಿದರೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಮತ್ತು ಸಿಬ್ಬಂದಿಗಳ ಗಮನಕ್ಕೆ ತರಬೇಕು ಎಂದು ಮನವಿಯನ್ನು ಮಾಡಿದ್ದಾರೆ.