ಹೆಗ್ಗಡದೇವನಕೋಟೆ: ನಮ್ಮ ಮುಂದಿರುವುದು ದೇಶದ ಚುನಾವಣೆ, ಪಂಚಾಯಿತಿ ಚುನಾವಣೆಯಲ್ಲ: ಪಟ್ಟಣದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ
ನಮ್ಮ ಮುಂದಿರುವುದು ದೇಶದ ಚುನಾವಣೆ, ಯಾವುದೋ ಪಂಚಾಯಿತಿ ಚುನಾವಣೆಯಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆ ನೀಡಿದ್ದಾರೆ. ಪಟ್ಟಣದ ಕನಕಭವನದಲ್ಲಿ ಗುರುವಾರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜಾತ್ಯಾತೀತ ಜನತಾ ದಳದ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಐದು ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಕೇಂದ್ರ ಸರ್ಕಾರವೇ ಅನುದಾನವನ್ನು ನೀಡುತ್ತಿದೆ ಎಂದು ಪ್ರೀತಂಗೌಡ ತಿಳಿಸಿದರು.