ವಿಜಯಪುರ: ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ, ನಗರದ ಆಸ್ಪತ್ರೆಯ ಎದುರಲ್ಲೇ ಗರ್ಭಿಣಿಯ ಹೆರಿಗೆ
ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಗರ್ಭಿಣಿ ಆಸ್ಪತ್ರೆ ಎದುರೇ ಹೆರಿಗೆ ಆಗಿರುವ ಘಟನೆ ವಿಜಯಪುರ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಕಾವೇರಿ ಎಂಬುವ ಗರ್ಭಿಣಿಗೆ ಹೆರಿಗೆ ಆಗಿದೆ. ಬಸವನ ಬಾಗೇವಾಡಿಯಿಂದ ವಿಜಯಪುರ ಜಿಲ್ಲಾಸ್ಪತ್ರೆ ಆವರಣಕ್ಕೆ ಆಗಮಿಸಿದ್ರೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಆವರಣದಲ್ಲಿಯೇ ಹೆರಿಗೆ ಆಗಿದೆ...