ಔರಾದ್: ಎನ್ಎಸ್ಎಸ್ಕೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಚಲಾಯಿಸಿ: ಬೆಳಕುಣಿಯಲ್ಲಿ ಶಾಸಕ ಪ್ರಭು ಚೌಹಾಣ್ ಮನವಿ
Aurad, Bidar | Sep 25, 2025 ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ರೈತ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಪ್ರಚಂಡ ಬಹುಮತ ನೀಡಿ ಗೆಲ್ಲಿಸಬೇಕು ಎಂದು ಶಾಸಕ ಪ್ರಭು ಚೌಹಾಣ್ ಮನವಿ ಮಾಡಿದರು. ಚುನಾವಣೆ ಹಿನ್ನೆಲೆಯಲ್ಲಿ ಬೆಳಕುಣಿಯಲ್ಲಿ ನಡೆದ ಮತಯಾಚನೆ ವೇದಿಕೆಯಲ್ಲಿ ರೈತ ಮತದಾರರಲ್ಲಿ ಅವರು ಗುರುವಾರ ಸಂಜೆ 5ಕ್ಕೆ ಮನವಿ ಮಾಡಿದರು. ಈ ವೇಳೆ ಪಕ್ಷದ ಮಂಡಲ ಅಧ್ಯಕ್ಷ ರಾಮ್ ಶೆಟ್ಟಿ ಪನ್ನಾಳೆ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು