ಹುಮ್ನಾಬಾದ್: ರಾಜ್ಯದ ವಿವಿಧ ಹಂತದ ಚುನಾವಣೆಗೆ ಬಿ ಎಸ್ ಪಿ ಅಭ್ಯರ್ಥಿಗಳ ಸ್ಪರ್ಧೆ ನಿಶ್ಚಿತ : ನಗರದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಅಶೋಕ ಮಂಠಾಳಕರ್
Homnabad, Bidar | Nov 11, 2025 ರಾಜ್ಯದ ವಿವಿಧ ಹಂತದ ಚುನಾವಣೆಗೆ ಬಿಎಸ್ಪಿ ಅಭ್ಯರ್ಥಿಗಳ ಸ್ಪರ್ಧೆ ನಿಶ್ಚಿತ ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಅಶೋಕ್ ಮಂಠಾಳಕರ್ ತಿಳಿಸಿದರು. ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ನಗರದ ಸರ್ಕಿಟ್ ಹೌಸ್ ನಲ್ಲಿ ಮಂಗಳವಾರ ಮಧ್ಯಾಹ್ನ 3ಕ್ಕೆ ಕರೆಯಲಾಗಿದ್ದ ಚಿಂತನ ಮಂಥನ ಸಭೆಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈ ವೇಳೆ ಪಕ್ಷದ ಜಿಲ್ಲಾ ಅಧ್ಯಕ್ಷ ಕಪಿಲ್ ಗೋಡಬೋಲೆ, ಹುಮ್ನಾಬಾದ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಭರತ್ ಭಾಗ್ಯಕರ್ ಮೊದಲಾದವರು ಹಾಜರಿದ್ದರು.