ಚಿತ್ರದುರ್ಗ: ನವರಾತ್ರಿ ಅಂತಿಮ ದಿನ ಹಿನ್ನೆಲೆ ಚಿತ್ರದುರ್ಗದಲ್ಲಿ ಸಿದ್ದಿಧಾತ್ರಿ ವೇಷದಲ್ಲಿ ಕಲಾವಿದೆ ಮವಿತಾ ಮಿಂಚಿಂಗ್
ನವರಾತ್ರಿಯ ಕೊನೆಯ ದಿನವಾದ ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಸಿದ್ದಿಧಾತ್ರಿ ವೇಷದಲ್ಲಿ ಕಲಾವಿದೆ ಮವಿತಾ ಭರ್ಜರಿಯಾಗಿ ಮಿಂಚಿದ್ದಾರೆ. ನಗರದ ಮೇಕಪ್ ಕಲಾವಿಧೆ ಪ್ರೀತಿ ಅವರ ಕೈಚಳಕದಲ್ಲಿ ಯುವತಿ ಮವಿತಾ ಸಿದ್ದಿಧಾತ್ರಿಯ ವೇಷಭೂಷಣದ ಜೊತೆ ಆಕರ್ಷಣಿಯ ಮೇಕಪ್ ಮಾಡಲಾಗಿದೆ. ಇದರಿಂದ ಸಿದ್ದಿಧಾತ್ರಿಯ ವೇಷಭೂಷಣದಲ್ಲಿ ಯುವತಿ ಮವಿತ ನೋಡುಗರ ಕಣ್ಮನ ಸೆಳೆದಿದ್ದಾರೆ. ಇನ್ನೂ ಸಿದ್ದಿಧಾತ್ರಿಯ ವೇಷದಲ್ಲೇ ನಗರದ ಪ್ರಮುಖ ಬೀದಿಗಳಲ್ಲಿ ಯುವತಿ ಮವಿ ಸಂಚರಿಸಿದ್ದು, ಈ ವೇಳೆ ಮಹಿಳೆಯರು ಆರತಿ ಬೇಳಗುವ ಮೂಲಕ ಗೌರವಿಸಿದ್ದಾರೆ. ಅಲ್ಲದೆ ಯುವತಿ ಕೈನಲ್ಲಿ ತ್ರಿಶೂಲ ಹಿಡಿದು, ದೇವಿಯ ಲುಕ್ ನಲ್ಲಿ ಮಿಂಚಿರುವ ವಿಡಿಯೋಗಳು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.