ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬೇರ್ಫೂಟ್ ಟಿಕ್ನಿಷಿಯನ್ಸ್(ಬಿಎಫ್ಟಿ) ಹಾಗೂ ಜಿಕೆಎಂಗಳ ಬಾಕಿ ವೇತನ ಬಿಡುಗಡೆಗೆ ಅಗ್ರಹಿಸಿ ರಾಜ್ಯ ಬೇರ್ ಫೂಟ್ ಟಿಕ್ನಿಷಿಯನ್ಸ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ವೈ.ಎಚ್.ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಳೆದ ಹಲವಾರು ವರ್ಷಗಳಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾ.ಪಂ ಹಾಗೂ ಗ್ರಾ.ಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಫ್ಟಿ ಹಾಗೂ ಜಿಕೆಎಂಗಳಿಗೆ ನಾಲ್ಕು ತಿಂಗಳಿನಿAದ ವೇತನ ಪಾವತಿಯಾಗಿರುವುದಿಲ್ಲ. ಇದರಿಂದ ಜೀವನ ನಡೆಸಲು ಸಂಕಷ್ಟ ಪಡುತ್ತಿದ್ದೇವೆ ಎಂದು ಸಂಘದ ಪದಧಿಕಾರಿಗಳು ಅಳಲು ತೋಡಿಕೊಂಡರು.