ಕಂಪ್ಲಿ: ನಗರದಲ್ಲಿ ಗುಡುಗು ಸಹಿತ ಮಳೆ
Kampli, Ballari | Oct 21, 2025 ಅ.21,ಮಂಗಳವಾರ ಸಂಜೆ 5ಗಂಟೆಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದೆ. ಮಧ್ಯಾಹ್ನದಿಂದಲೇ ಕಮಳಿಸುತ್ತಿದ್ದ ಆಕಾಶ ಸಂಜೆ ವೇಳೆಗೆ ಮಬ್ಬಾಗಿ, ಬಳಿಕ ಗುಡುಗು ಜೊತೆಗೆ ಮಳೆ ಸುರಿಯಿತು. ಮಳೆಯ ಪರಿಣಾಮವಾಗಿ ಕೆಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿರುವುದಾಗಿ ತಿಳಿದುಬಂದಿದೆ.