ಹುಮ್ನಾಬಾದ್: ಬಲಿ ಪಾಡ್ಯಮಿ ಹಿನ್ನೆಲೆ ನಗರದಲ್ಲಿ ಗೌಳಿ ಸಮಾಜದಿಂದ ಅಲಂಕೃತ ಕೋಣಗಳ ಭವ್ಯ ಮೆರವಣಿಗೆ
Homnabad, Bidar | Oct 22, 2025 ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ನಗರದಲ್ಲಿ ಬುಧವಾರ ಸಂಜೆ 6:30ಕ್ಕೆ ಕೋಣಗಳನ್ನು ಅಲಂಕರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ಅಲಂಕೃತ ಕೋಣಗಳನ್ನು ಮನೆಯಿಂದ ಹೊತ್ತಿ ಉರಿಯುವ ಬೆಂಕಿ ಮೇಲಿಂದ ಓಡಿಸಿಕೊಂಡು ಗೌಳಿ ಓಣೆಯಿಂದ ವೀರಭದ್ರೇಶ್ವರ ದೇವಸ್ಥಾನ ವರೆಗೆ ವಾದ್ಯವೃಂದ ಸಮೇತ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.