ಜೇವರ್ಗಿ: ಭೀಮಾ ನದಿ ಪ್ರವಾಹ: ಕಟ್ಟಿಸಂಗಾವಿ ಗ್ರಾಮದ ಬಳಿ ಬೃಹತ್ ಸೇತುವೆ ಮುಳುಗಡೆ, ವಾಹನ ಸಂಚಾರ ಸ್ಥಗಿತ
ಕಲಬುರಗಿ : ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗ್ತಿದ್ದು, ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಬಳಿ ಬೃಹತ್ ಹಳೆ ಸೇತುವೆ ಮುಳುಗಡೆಯಾಗಿದೆ.. ಸಧ್ಯ ಹೊಸ ಸೇತುವೆ ಕೂಡ ಮುಳುಗಡೆ ಹಂತಕ್ಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಹೊಸ ಸೇತುವೆ ಮೇಲೆ ಕೂಡ ವಾಹನ ಸಂಚಾರ ಸ್ಥಗಿತ ಮಾಡಲಾಗಿದೆ. ಸೆ27 ರಂದು ಮಧ್ಯಾನ 2 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಭೀಮಾ ನದಿಗೆ 3.50 ಲಕ್ಷಕ್ಕೂ ಅಧಿಕ ನೀರು ಬಿಟ್ಟ ಪರಿಣಾಮ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎತ್ತರದ ಕಟ್ಟಿಸಂಗಾವಿ ಬ್ರೀಡ್ಜ್ ಸಹ ಮುಳುಗಡೆಯಾಗಿದೆ