ಚಿತ್ತಾಪುರ: ಇಂಗಳಗಿ ಬಳಿ ಪ್ರವಾಹದಲ್ಲಿ ಸಿಲುಕಿದ್ದ ವಿಶ್ವರಾಧ್ಯ ತಪೋವನದ ಶ್ರೀಗಳನ್ನ ರಕ್ಷಿಸಿದ ಗ್ರಾಮಸ್ಥರು: ಗ್ರಾಮಸ್ಥರ ಕಾರ್ಯಾಚರಣೆ ಹೇಗಿತ್ತು ಗೋತ್ತಾ?
ಕಲಬುರಗಿ :ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿ ಆರ್ಭಟದ ಜೊತೆ ಜೊತೆಗೆ ಕಾಗಿಣಾ ನದಿ ಆರ್ಭಟ ಕೂಡ ಹೆಚ್ಚಾಗಿದ್ದು, ಶಹಬಾದ್-ಇಂಗಳಗಿ ಗ್ರಾಮದ ಮಧ್ಯೆ ಕಾಗಿಣ ನದಿ ಪ್ರವಾಹದಲ್ಲಿ ಸಿಲುಕಿದ್ದ ವಿಶ್ವರಾಧ್ಯ ತಪೋವನದ ಶ್ರೀ ಚಂದ್ರಶೇಖರ ಶರಣರನ್ನ ಗ್ರಾಮಸ್ಥರೇ ರಕ್ಷಣೆ ಮಾಡಿರೋ ಘಟನೆ ಸೆ28 ರಂದು ಬೆಳಗ್ಗೆ 10 ಗಂಟೆಗೆ ನಡೆದಿದೆ. ಇಡೀ ಇಂಗಳಗಿ ಗ್ರಾಮದ ಜೊತೆ ತಪೋವನವನ್ನ ಕಾಗಿಣ ನದಿ ಆವರಿಸಿದ್ದು, ವಿಶ್ವರಾಧ್ಯ ತಪೋವನಕ್ಕೆ ನೀರು ನುಗ್ಗಿ ಒಳಗಡೆ ಶ್ರೀ ಚಂದ್ರಶೇಖರ ಶರಣರು ಸಿಲುಕಿದ್ದರು. ಈ ವೇಳೆ ಗ್ರಾಮಸ್ಥರೇ ಡ್ರಮ್ಗಳಿಂದಲೇ ದೋಣಿ ಮಾಡಿ ಅದರ ಮೇಲೆ ಶ್ರೀಗಳನ್ನ ಕೂಡಿಸಿಕೊಂಡು ಪ್ರವಾಹದಿಂದ ಶ್ರೀಗಳನ್ನ ಸುರಕ್ಷಿತವಾಗಿ ಕರೆತಂದಿದ್ದಾರೆ.