ಅಂಕೋಲ: ಭಾವಿಕೇರಿಯಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣು
ಅಂಕೋಲಾ: ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ. ತವರು ಮನೆಗೆ ಹೋಗಿದ್ದ ಪತ್ನಿ ದೀಪಾವಳಿ ಹಬ್ಬಕ್ಕೂ ಬಂದಿಲ್ಲ ಎಂದು ಮನನೊಂದ ಪತಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಶಿವಾನಂದ ಶಂಕರ್ ಆಗೇರ್ (34) ಮೃತ ವ್ಯಕ್ತಿಯಾಗಿದ್ದು,. ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಿವಾನಂದ ದಂಪತಿಗಳ ನಡುವೆ ಸಣ್ಣಪುಟ್ಟ ಗಲಾಟೆ ನಡೆದಿತ್ತು ಇದರಿಂದ ಬೇಸತ್ತು ಮೃತ ಶಿವಾನಂದ ಆಗೇರ್ ಪತ್ನಿ ತವರು ಮನೆಗೆ ತೆರಳಿದ್ದಳು.ಇದರಿಂದ ಮನನೊಂದ ಪತಿ ನೇಣಿಗೆ ಶರಣಾಗಿದ್ದಾನೆ.