ಜಾನುವಾರಗಳಿಗೆ ಕಾಳಜಿ ಕೇಂದ್ರದಲ್ಲಿ ಮೇವಿಲ್ಲ : ಪಟ್ಟಣದಲ್ಲಿ ಆಕ್ರೋಶ ಹೊರಹಾಕಿದ ಜಾನುವಾರ ಮಾಲೀಕ
ಜಿಲ್ಲೆಯ ಅಲಮೇಲ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಭೀಮಾ ನದಿಯ ಅಬ್ಬರಕ್ಕೆ ತತ್ತರಿಸಿದ ಸಂತ್ರಸ್ತರಿಗೆ ಸದ್ಯ ಜಿಲ್ಲಾಡಳಿತ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದು ಅಲ್ಲಿ ಇರುವ ಸಂತ್ರಸ್ತರಿಗೆ ಊಟ ಉಪಚಾರದ ವ್ಯವಸ್ಥೆ ಮಾಡುತ್ತಿದೆ ಆದರೆ ರೈತರ ಜಾನುವಾರುಗಳಿಗೆ ಮಾತ್ರ ಮೇವಿನ ಕೊರತೆ ಎದುರಾಗಿದೆ. ಇದರಿಂದ ಮೂಕ ಜಾನುವಾರುಗಳು ಮೇವಿಲ್ಲದೆ ನರಳುವಂತಾಗಿದ್ದು ಜಮೀನುಗಳು ಜಲಾವೃತವಾದ ಪರಿಣಾಮ ಮೇವು ತರಲು ಆಗದೆ ಪರದಾಡುವಂತಾಗಿದೆ..