ಶ್ರೀರಂಗಪಟ್ಟಣ: ಗಂಜಾಂ ಬಳಿ ಬೆಂ- ಮೈ ರಾಷ್ಟ್ರೀಯ ಹೆದ್ದಾರಿ ಬದಿ ಸರ್ವಿಸ್ ರಸ್ತೆಗೆ ಅಡ್ಡಲಾಗಿ ಹಾಕಿದ್ದ 30 ಮೀ. ತಡೆಬೇಲಿಯನ್ನು ಹೊತ್ತೊಯ್ದಿರುವ ಕಳ್ಳರು
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿ ಸರ್ವಿಸ್ ರಸ್ತೆಗೆ ಅಡ್ಡಲಾಗಿ ಹಾಕಿದ್ದ 30 ಮೀ. ತಡೆಬೇಲಿಯನ್ನು ಕಡಿದು ಕಳ್ಳರು ಹೊತ್ತೊಯ್ದಿರುವ ಘಟನೆ ಗಂಜಾಂ ಗ್ರಾಮದ ಬಳಿ ಜರುಗಿದೆ. ಈ ಕುರಿತು ಡಿಬಿಎಲ್ ಕಂಪನಿಯ ಕಂಟ್ರೋಲ್ ರೂಂ ಆಫೀಸರ್ ಸುನಿಲ್ ಕುಮಾರ್ ಎಂಬುವವರು ಪಟ್ಟಣ ಠಾಣೆಯಲ್ಲಿ ದೂರು ನೀಡಿ, 30 ಸಾವಿರ ಮೌಲ್ಯದ ವಸ್ತು ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಗಂಜಾಂ ಗುಂಜ ನರಸಿಂಹಸ್ವಾಮಿ ದೇವಾಲಯದ ಮುಂಭಾಗ ಘಟನೆ ಜರುಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.